ರಮಾನಾಥ ರೈ ಅವರಿಗೆ ತಾಕತ್ತಿದ್ದರೆ ಮತಾಂಧ ಮುಸಲ್ಮಾನರ ವಿರುದ್ಧ ಧ್ವನಿ ಎತ್ತಲಿ : ಹರೀಶ್ ಪೂಂಜ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರ ಮೇಲೆ ಕಾಂಗ್ರೆಸ್ ಸರ್ಕಾರ ಎಫ್ಐಆರ್ ದಾಖಲಿಸಿರುವುದರ ವಿಚಾರವಾಗಿ ಹರೀಶ್ ಪೂಂಜಾ ಅವರು ಮಾಜಿ ಸಚಿವ ರಮನಾಥ್ ರೈ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ರಾಜಕೀಯಕ್ಕಾಗಿ ಬಿಜೆಪಿಯ ಜನಪ್ರತಿನಿಧಿಗಳು, ಶಾಸಕರ ಮೇಲೆ ಕೇಸ್ ದಾಖಲಿಸಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ, ಆದರೆ ಬಿಜೆಪಿ ಇದಕ್ಕೆ ಬಗ್ಗುವುದಿಲ್ಲ.
ಬಿಜೆಪಿ ಶಾಸಕರ ವಿರುದ್ಧ ಮಾತನಾಡಿರುವ ರಮಾನಾಥ ರೈ ಅವರನ್ನು ಕುರಿತಂತೆ, ರಮಾನಾಥ ರೈ ಅವರಿಗೆ ತಾಕತ್ತಿದ್ದರೆ ಮುಸ್ಲಿಮರ ವಿರುದ್ಧ ಹೇಳಿಕೆ ಕೊಡಲಿ ಎಂದು ಕಿಡಿಕಾರಿದ್ದಾರೆ.
ರಮಾನಾಥ ರೈಗಳಿಗೆ ತಾಕತ್ತು ಇದ್ದರೆ ಉಲ್ಲಾಳದ ಹಿಂದೂ ತರುಣಿಯನ್ನು ಲವ್ ಜಿಹಾದ್ ಮೂಲಕ ಅಪಹರಿಸಿದ ಮತಾಂಧ ಮುಸಲ್ಮಾನನ ವಿರುದ್ಧ ಧ್ವನಿ ಎತ್ತಲಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅವ್ಯಾಹತ ಗೋಕಳ್ಳತನ, ಗೋಹತ್ಯೆಯ ವಿರುದ್ಧ ಮಾತನಾಡಲಿ, ಕುಕ್ಕರ್ ಬಾಂಬ್ ಸ್ಪೋಟದ ರೂವಾರಿಯ ವಿರುದ್ಧ ಮಾತನಾಡಲಿ ಎಂದು ಕುಟುಕಿದ್ದಾರೆ. ಮುಸಲ್ಮಾನರನ್ನು ಓಲೈಸಲು ಹಿಂದೂ ಸಮಾಜದ ಮೇಲೆ, ಹಿಂದೂ ನಾಯಕರ ಮೇಲೆ ದಬ್ಬಾಳಿಕೆ ತೋರಿಸುತ್ತಿದ್ದಾರೆ ಎಂದೂ ಹರೀಶ್ ಪೂಂಜ ಅವರು ಆರೋಪಿಸಿದ್ದಾರೆ.