ರಾಜಕೀಯವಿಶೇಷ

ಸೂತಕದ ಮನೆಯಲ್ಲಿ ವಿಕೃತಿ ಮೆರೆದ ರಕ್ಷಿತ್‌ ಶಿವರಾಮ್

Share News

ಬೆಳ್ತಂಗಡಿಯ ಧೀಮಂತ ನಾಯಕ ವಸಂತ ಬಂಗೇರ (Vasanth Bangera) ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ರಾಜ್ಯ ಸರ್ಕಾರ ಕೂಡಾ ಮಾಜಿ ಶಾಸಕರಿಗೆ ಸರ್ಕಾರಿ ಗೌರವದಿಂದ ಅಂತಿಮ ನಮನಕ್ಕೆ ಆದೇಶ ನೀಡಿತ್ತು. ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ನಾಯಕರು ಬಂಗೇರ ಅವರ ಅಂತಿಮ ದರ್ಶನ ಪಡೆದಿದ್ದರು. ಬೆಳ್ತಂಗಡಿ ತಾಲ್ಲೂಕಿನ (Belthangady) ಜನತೆ, ಬಂಗೇರ ಅವರ ಅಭಿಮಾನಿಗಳೂ ಕೂಡಾ ಮೌನವಾಗಿ ಅಂತಿಮ ವಿದಾಯ ಹೇಳಿದ್ದರು.

ದಿವಂಗತ ಬಂಗೇರ ಅವರ ಕುಟುಂಬದ ಸಂಪ್ರದಾಯದಂತೆ ಉತ್ತರಕ್ರಿಯೆಯೂ ನಡೆದಿತ್ತು. ಈ ಉತ್ತರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaihh) ಅವರೂ ಭಾಗಿಯಾಗಿದ್ದರು. ಸಿಎಂ ಆಗಮನದ ವೇಳೆ ಸಾವಿನ ಮನೆ ಎಂಬುದನ್ನೂ ಮರೆತೂ ಕಾಂಗ್ರೆಸ್‌ ನಾಯಕರು ಸಿಎಂ ಅವರ ಹಿಂದೆ ಮುಂದೆ ಕಾಣಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಕಂಡು ಬರುತ್ತಿತ್ತು.

 

ಸಾವಿನ ಮನೆಯಲ್ಲೂ ಪ್ರಭಾವಿ ಎನಿಸಿಕೊಳ್ಳುವ ಅಗತ್ಯವೇನಿತ್ತು?

ಇತ್ತ ಮನೆಯ ಸದಸ್ಯನನ್ನು, ಧೀಮಂತ ನಾಯಕನೋರ್ವನನ್ನು, ತಮ್ಮ ನೆಚ್ಚಿನ ಮುಖಂಡನ್ನು ಕಳೆದುಕೊಂಡ ದುಃಖದಲ್ಲಿದ್ದರೆ ಅತ್ತ ಸಿಎಂ ಆಗಮನದ ವೇಳೆ ಅವರ ಎಡಬಲದಲ್ಲಿ ನಿಂತುಕೊಳ್ಳುವ, ಅವರ ಹಿಂದೆ ಮುಂಚೂಣಿಯಲ್ಲಿ ನಿಂತುಕೊಳ್ಳಲು ನಾಯಕರೆನಿಸಿಕೊಂಡವರು ಪೈಪೋಟಿ ನಡೆಸುತ್ತಿದ್ದರು.

ಮರಣದ ಮನೆಯಲ್ಲಿ ಬೆಂಬಲಿಗರಿಂದ ಜೈಕಾರ ಕೂಗಿಸಿಕೊಂಡ ನಾಯಕ!

ಸಿಎಂ ಸಿದ್ದರಾಮಯ್ಯ ಬಂಗೇರ ಅವರ ಉತ್ತರಾದಿ ಕ್ರಿಯೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ (Rakshith Shivaram) ಅವರು ತಮ್ಮ ಬೆಂಬಲಿಗರಿಂದ ಸಾವಿನ ಮನೆ ಎಂಬುದನ್ನೂ ಮರೆತು ತಮಗೆ ಮತ್ತು ಮುಖ್ಯಮಂತ್ರಿಗಳಿಗೆ ಜಯಕಾರ ಕೂಗಿಸಿಕೊಂಡ ಘಟನೆಯೂ ನಡೆದಿದೆ. ಜೈಕಾರ ಕೂಗಲು ಮೊದಲೇ ಸೂಚನೆ ನೀಡಲಾಗಿತ್ತೂ ಎನ್ನುವ ಸುದ್ದಿಯೂ ಕೇಳಿಬಂದಿದೆ. ಈ ಘಟನೆಯ ವಿಡಿಯೋ ವೈರಲ್‌ (Viaral Video) ಆಗಿದ್ದು, ಬಂಗೇರಂತಹ ಸಜ್ಜನ ರಾಜಕಾರಣಿಯ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಂಡ ರಕ್ಷಿತ್‌ ಶಿವರಾಮ್‌ ಅವರ ನಡೆಗೆ ಬಂಗೇರ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೇವರ ಪ್ರಸಾದ ಸೇವಿಸುವುದರಿಂದ ನಿಮ್ಮೊಳಗೆ ಈ ಬದಲಾವಣೆಗಳು ನಿಶ್ಚಿತ!

ಸಿದ್ದು ಬಜೆಟ್‌ ವಿರುದ್ಧ ಹರೀಶ್‌ ಪೂಂಜ ಟೀಕಾ ಪ್ರಹಾರ

Related Articles

Leave a Reply

Your email address will not be published. Required fields are marked *

Back to top button