Latest Newsತಂತ್ರಜ್ಞಾನಪ್ರಚಲಿತವಿಶೇಷ

ಮತ್ತೊಮ್ಮೆ ನಗೆ ಪಾಟಲಿಗೀಡಾದ ರಕ್ಷಿತ್‌ ಶಿವರಾಮ್

Share News

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದದಲ್ಲಿ ರಾಜಕೀಯ ಜಿದ್ದಾದಿದ್ದು ಮುಂದುವರೆದಿದ್ದು, ಚುನಾವಣೆ ಕಳೆದು ವರ್ಷ ಕಳೆದ ಬಳಿಕವೂ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಈ ನಡುವೆ ಸ್ಥಳೀಯ ಶಾಸಕ ಹರೀಶ್ ಪೂಂಜ ಅವರನ್ನು ವಿರೋಧಿಸಲು ವಚನದ ಸಾಲುಗಳನ್ನು ಪ್ರಸ್ತಾಪಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಿತ್‌ ಶಿವರಾಮ್‌ ಅವರು ನಗೆಪಾಟಲಿಗೆ ಈಡಾಗಿದ್ದಾರೆ.

ವಚನದ ಕರ್ತೃಗಳನ್ನೇ ಬದಲಾಯಿಸಿದ ರಕ್ಷಿತ್

ನಿರಂತರವಾಗಿ ಎರಡು ಬಾರಿ ಗೆದ್ದಿರುವ ಜನಪ್ರಿಯ ಶಾಸಕ ಹರೀಶ್‌ ಪೂಂಜ ಅವರನ್ನು ಪತ್ರಿಕಾಗೋಷ್ಠಿಯ ಮೂಲಕ ಟೀಕಿಸಲು ರಕ್ಷಿತ್‌ ಶಿವರಾಮ್‌ ಅವರು ” ಕೊಟ್ಟ ಕುದುರೆಯನ್ನು ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಬಸವಣ್ಣ ಹೇಳಿದ್ದಾರೆ” ಎಂಬ ಮಾತುಗಳನ್ನಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮಲ್ಲೇಶ್ವರಂ ಮೂಲದ ರಕ್ಷಿತ್‌ ಶಿವರಾಮ್‌ ಅವರ ಮಾತುಗಳನ್ನು ಕೇಳಿಸಿಕೊಂಡ ಬಿಜೆಪಿ ಕಾರ್ಯಕರ್ತರು ಹೊಟ್ಟೆತುಂಬಾ ನಗಾಡುತ್ತಿರುವ ಸುದ್ದಿ ಇದೀಗ ಹೊರಬಿದ್ದಿದೆ. ಅಲ್ಲಮಪ್ರಭುವಿನ ವಚನವನ್ನು ಬಸವಣ್ಣನವರು ಎಂದು ತಪ್ಪಾಗಿ ಹೇಳಿದ್ದೇ ಇದಕ್ಕೆ ಕಾರಣವಾಗಿದೆ.

ವಾಸ್ತವದಲ್ಲಿ ಅಲ್ಲಮಪ್ರಭುಗಳ ವಚನ ಸಾಹಿತ್ಯ ಹೀಗಿದೆ :

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ
ನೆರೆ ಮೂರು ಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ

ವಕೀಲನಾಗಿದ್ದುಕೊಂಡು ಅಲ್ಲಮಪ್ರಭುವಿನ ವಚನದ ಸಾಲುಗಳನ್ನು ಬಸವಣ್ಣನವರ ಮಾತುಗಳು ಎಂದು ಹೇಳುವ ಮೂಲಕ ಕಾಮಿಡಿ ಪೀಸ್‌ ಆಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಟ್ರೋಲ್‌ ಮಾಡುತ್ತಿದ್ದಾರೆ.

ಲಾಯರ್ ಪದವಿ ಹೇಗೆ ಸಿಕ್ಕಿದ್ದು ಎಂದು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರು

ರಕ್ಷಿತ್‌ ಶಿವರಾಮ್‌ ಅವರ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಲ್ಲಮಪ್ರಭುವಿನ ವಚನ ಯಾವುದು ಬಸವಣ್ಣನವರ ವಚನ ಯಾವುದು ಎಂದು ತಿಳಿಯದ ನೀವುಗಳು ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಬೇಡಿ. ನಿಮಗೆಲ್ಲ ಲಾಯರ್ ಪದವಿ ಹೇಗೆ ಸಿಗ್ತು ಅನ್ನೋದೇ ನಮ್ಮನ್ನು ಕಾಡುತ್ತಿದೆ ಎಂದು ಜನರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

https://www.facebook.com/watch/?mibextid=rS40aB7S9Ucbxw6v&v=1016063459920473

Related Articles

Leave a Reply

Your email address will not be published. Required fields are marked *

Back to top button